
ಹೀನ ಮಾನವರೇನ ಮಾಡಬಲ್ಲರೋ ರಂಗ
ಮಚ್ಚರಿಸುವರೆಲ್ಲ ಕೂಡಿ ಮಾಡುವದೇನು
ಅಚ್ಯುತ ನಿನದೊಂದು ದಯೆಯಿರಲು
ವಾತ್ಸಲ್ಯ ಬಿಡದಿರು ನಿನ್ನ ನಂಬಿದೆ ದೇವ
ಕಿಚ್ಚಿಗೆ ಇರುವೆ ಮುತ್ತುವುದೆ ಕೇಳೆಲೋ ರಂಗ
ಧಾಳಿಲಿ ಕುದುರೆ ವೈಯಾರದಿ ಕುಣಿಯಲು
ಧೂಳು ರವಿಯ ಮೇಲೆ ಮುಸುಕುವುದೆ
ತಾಳಿದವರಿಗೆ ವಿರುದ್ಧ ಲೋಕದೊಳುಂಟೆ
ಗಾಳಿಗೆ ಗಿರಿಯು ಅಲ್ಲಾಡಬಲ್ಲುದೆ ರಂಗ
ಕನ್ನಡಿಯೊಳಗಿನ ಗಂಟು ಕಂಡು ಕಳ್ಳ
ಕನ್ನವಿಕ್ಕಲವನ ವಶವಹುದೆ
ನಿನ್ನ ನಂಬಲು ಮುದ್ದು ಪುರಂದರವಿಠಲ
ಚಿನ್ನಕ್ಕೆ ಪುಟವಿಟ್ಟಂತೆ ಅಹುದು ರಂಗ
ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ
2 comments:
ಮಚ್ಚರಿಸುವರೆಲ್ಲ ಬದಲಿಗೆ ಮತ್ಸರಿಸುವರೆಲ್ಲ
ತಾಳಿದವರಿಗೆ ವಿರುದ್ಧ ಬದಲಿಗೆ ತಾಳಿದವರಿಗೆ ಎದಿರು
ಅಲ್ಲಾಡಬಲ್ಲುದೆ ರಂಗ ಬದಲಿಗೆ ಅಲುಗಬಹುದೆ ರಂಗ
Super
Post a Comment