ಮುಸುರೆ ತೊಳೆಯಬೇಕು
ಮುಸುರೆ ತೊಳೆಯಬೇಕು
ಗುಸುಗುಸು ಬಿಡಬೇಕು
ಈಶ ಪ್ರೇರಣೆಯೆಂಬೊ ಹಸಿಯ
ಹುಲ್ಲನು ಹಾಕಿ
ಅಷ್ಟ ಮದದಿಂದ ಸುಟ್ಟ
ಈ ಪಾತ್ರೆಯ
ವಿಷ್ಣುನಾಮವೆಂಬೊ ಕೃಷ್ಣಾನದಿಯಲ್ಲಿ
ಕಾಮಕ್ರೋಧದಿಂದ ಬೆಂದ
ಈ ಪಾತ್ರೆಯ
ರಾಮಕೃಷ್ಣರೆಂಬೊ ಹೇಮಾನದಿಯಲ್ಲಿ
ವಿಷವೆಂಬೊ ಪಾತ್ರೆಯ
ಮುಸುರೆ ತೊಳೆದಿಟ್ಟು
ಬಿಸಜಾಕ್ಷ ಪುರಂದರವಿಠಲಗರ್ಪಿಸೊ
ನಿತ್ಯ
ರಾಗ: ಧನ್ಯಾಸಿ ತಾಳ: ಮಟ್ಟ
1 comment:
ಇಂಥಹ ಉತ್ತಮ ಕಾರ್ಯ ನಿರ್ವಹಿಸಲು ದೇವರು ತಮಗೆ ಆಯುರಾರೋಗ್ಯ ಭಾಗ್ಯ ನೆಮ್ಮದಿ ಕೊಟ್ಟು ಕಾಪಾಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ,
Post a Comment