ಮುತೈದೆಯಾಗಿರಬೇಕು ಮುದದಿಂದಲಿ

ಮುತೈದೆಯಾಗಿರಬೇಕು ಮುದದಿಂದಲಿ

ಹತ್ತುನೂರು ನಾಮದೊಡೆಯ ಹರಿ ನಮ್ಮ ಪತಿಯೆಂದು

ಗುರುವಿಂದ ಶಾಸ್ತ್ರವನು ಓದುವುದೆ ಮಾಂಗಲ್ಯ
ವೈರಾಗ್ಯವೆಂಬುದೆ ಒಪ್ಪುವ ಮೂಗುತಿ
ತಾರತಮ್ಯಜ್ಞಾನ ತಾಯಿತ್ತು ಮುತ್ತು ಸರ
ಕರುಣರಸವೆಂಬಂಥ ಕಟ್ಟಾಣಿ ಕಟ್ಟಿಕೊಂಡು

ಹರಿಕಥೆಯ ಕೇಳುವುದು ಕಿವಿಗೆ ಮುತ್ತಿನ ಓಲೆ
ನಿರುತ ಸತ್ಕರ್ಮವು ನಿಜ ಕಾಂತಿಯು
ಪರಮ ಭಕ್ತರ ಪಾದರಜ ಹೆರಳು ಬಂಗಾರ
ಗುರು ಭಕುತಿಯೆಂಬಂಥ ಗಂಧ ಕುಂಕುಮ ಧರಿಸಿ

ಪೊಡವಿಯೊಳು ಪರಹಿತದ ಪಟ್ಟವಾಳಿಯನುಟ್ಟು
ಕೊಡುವ ಧರ್ಮವೆಂಬ ಕುಬುಸ ತೊಟ್ಟು
ಬಿಡದೆ ಎನ್ನೊಡೆಯ ಶ್ರೀ ಪುರಂದರವಿಟ್ಠಲನ
ಧೃಡ ಭಕುತಿ ಎಂಬಂಥ ಕಡಗ ಬಳೆ ಇಟ್ಟುಕೊಂಡುರಾಗ: ಕಾಂಬೋದಿ   ತಾಳ: ಅಟ್ಟ

No comments: