ಊಟಕ್ಕೆ ಬಂದೆವು ನಾವು ನಿಮ್ಮ


ಊಟಕ್ಕೆ ಬಂದೆವು ನಾವು ನಿಮ್ಮ
ಆಟ ಪಾಟವ ಬಿಟ್ಟು ಅಡುಗೆ ಮಾಡಮ್ಮ

ಕತ್ತಲಿಟ್ಟಾವಮ್ಮ ಕಣ್ಣು ಬಾಯಿ
ಒತ್ತಿ ಬರುತಲಿದೆ ಕೈಕಾಲು ಝಮ್ಮು
ಹೊತ್ತು ಹೋಗಿಸಬೇಡವಮ್ಮ ಒಂದು
ತುತ್ತಾದರು ಇತ್ತು ಸಲಹು ನಮ್ಮಮ್ಮ

ಒಡಲೊಳಗೆ ಉಸಿರಿಲ್ಲ ಒಂದು
ಕ್ಷಣವಾದರೆ ಜೀವ ನಿಲ್ಲುವುದಿಲ್ಲ
ಮಡಿದರೆ ದೋಷ ತಟ್ಟುವುದು ಒಂದು
ಹಿಡಿ ಅಕ್ಕಿಯಿಂದಲೆ ಕೀರ್ತಿ ಬಾಹೋದು

ಹೊನ್ನರಾಶಿಯ ತಂದು ಸುರಿಯೆ ಕೋಟಿ
ಕನ್ನಿಕೆಯರ ತಂದು ಧಾರೆಯನೆರೆಯೆ
ಅನ್ನದಾನಕ್ಕಿನ್ನು ಸರಿಯೆ ಪ್ರ-
ಸನ್ನ ಪುರಂದರವಿಟ್ಠಲ ದೊರೆಯೆ.

2 comments:

Anonymous said...

ನಮಾಸ್ಕಾರ ವಿನೋದ್,

ತುಂಬಾ ಓಳ್ಳೆ ಕೆಲಸ ಮಾಡ್ತಾಈದ್ದಿಯಾ, ಎಲ್ಲಾ ಒಳ್ಳೆಯದು ಆಗಲಿ.

ಶ್ರೀಧರ
ಆಘ್ಸ್ಬುರ್ಗ್, ಜರ್ಮನಿ

Unknown said...

ನಿಮ್ಮ ಚಿತ್ರಗಳು ಸಮಯೋಚಿತವಾಗಿವೆ