ಮನವ ನಿಲಿಸುವುದು ಬಹು ಕಷ್ಟ

ಮನವ ನಿಲಿಸುವುದು ಬಹು ಕಷ್ಟ ಹರಿದಾಡುವಂಥ

ಕಾಶಿಗೋಗಲುಬಹುದು ದೇಶ ತಿರುಗಲುಬಹುದು
ಆಸೆ ಸುಟ್ಟಂತೆ ಇರಬಹುದು
ಹರಿದಾಡುವಂಥ-

ಜಪವ ಮಾಡಲುಬಹುದು ತಪವ ಮಾಡಲುಬಹುದು
ಉಪವಾಸ ವ್ರತದಲ್ಲಿರಬಹುದು
ಹರಿದಾಡುವಂಥ-

ಸ್ನಾನ ಮಾಡಲುಬಹುದು ಮೌನ ಮಾಡಲುಬಹುದು
ಧ್ಯಾನದಿ ಪುರಂದರವಿಠಲನ ಚರಣದಲಿ
ಹರಿದಾಡುವಂಥ-

ರಾಗ: ನಾದನಾಮಕ್ರಿಯೆ    ತಾಳ: ಆದಿ

No comments: