ಶ್ರೀನಿವಾಸ ಎನ್ನ ಬಿಟ್ಟು - Shrinivasa enna bittu

ಶ್ರೀನಿವಾಸ ಎನ್ನ ಬಿಟ್ಟು ನೀನಗಲದೆ
ಮನವೆಂಬೊ ಮಂಟಪ ತನುವೆಂಬೊ ಹಾಸುಮಂಚ
ಜ್ಞಾನವೆಂಬೊ ದಿವ್ಯ ದೀಪದ ಬೆಳಕಿಲಿ ಸನಕಾದಿ ವಂದ್ಯ ನೀ ಬೇಗ ಬಾರೊ

ಪಂಚದೈವರು ಯಾವಾಗಲು ಎನ್ನ ಹೊಂಚುಹಾಕಿ ನೋಡುತಾರೊ
ಕೊಂಚಗಾರರು ಆರು ಮಂದಿ ಅವರು ಹಿಂಚುಮುಂಚಿಲ್ಲದೆ ಎಳೆಯುತಾರೆ

ಮುನ್ನ ಮಾಡಿದ ದುಷ್ಕರ್ಮದಿ ಬಳಲಿದೆ ಇನ್ನಾದರು ಎನ್ನ ಕೈಪಿಡಿಯೊ
ಘನಮಹಿಮ ಶ್ರೀಪುರಂದರವಿಠಲ ಮನ್ನಿಸಿ ಎನ್ನನು ಕಾಯ ಬೇಕೊ1. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

No comments: