ಕಂಡೆ ಕರುಣಾನಿಧಿಯ


ಕಂಡೆ ಕರುಣಾನಿಧಿಯ ಗಂಗೆಯ
ಮಂಡೆಯೊಳಿಟ್ಟ ದೊರೆಯ ಶಿವನ

ರುಂಡಮಾಲೆ ಸಿರಿಯನೊಸಲೊಳು
ಕೆಂಡಗಣ್ಣಿನ ಬಗೆಯ ಹರನ

ಕಪ್ಪುಗೊರಳ ಹರನ ಕಂದರ್ಪ ಪಿತನ ಸಖನ
ಮುಪ್ಪುರ ಗೆಲಿದವನ ಮುನಿಸುತ ಸರ್ಪಭೂಷಣ ಶಿವನ ಹರನ

ಭಸಿತ ಭೂಷಿತ ಶಿವನ ಭಕ್ತರ ವಶದೊಳಗಿರುತಿಹನ
ಪಶುಪತಿಯಿನಿಸುವವ ವಸುಧೆಯೋಳ್ ಶಶಿಶೇಖರ ಶಿವನ ಹರನ

ಗಜ ಚರ್ಮಾಂಬರನ ಗೌರೀವರ ತ್ರಿಜಗದೀಶ್ವರನ
ತ್ರಿಜಗನ್ಮೋಹಕನ ತ್ರಿಲೋಚನ ತಿಪುರಾಂತಕ ಶಿವನ ಹರನ

ಕಾಮಿತ ಫಲವೀವನ ಭಕ್ತರ ಪ್ರೇಮದಿ ಸಲಹುವನ
ರಾಮನಾಮಸ್ಮ್ರರನ ರತಿಪತಿ ಕಾಮನ ಸಂಹರನ ಶಿವನ

ಧರೆಗೆ ದಕ್ಷಿಣಕಾಶಿ ಎನಿಸುವ ಪುರಪಂಪಾವಾಸಿ
ತಾರಕ ಉಪದೇಶಿ ಪುರಂದರವಿಠಲ ಭಕ್ತರ ಪೋಷಿ

3 comments:

Anonymous said...

ನಾನು ಟೈಟಲ್ ನೋಡಿ ಆ .. ಕರುಣಾನಿಧಿ ಅನ್ಕೊಂಡೆ :D

Unknown said...

ಹಾಡು ಬೇಕಿತ್ತು....

Unknown said...

ಹಾಡು ಬೇಕಿತ್ತು....