ದೇವಕಿ ಕಂದ ಮುಕುಂದ


ದೇವಕಿ ಕಂದ ಮುಕುಂದ

ನಿಗಮೋದ್ಧಾರ ನವನೀತ ಚೋರ
ಖಗಪತಿ ವಾಹನ ಜಗದೋದ್ಧಾರ

ಶಂಖ ಚಕ್ರಧರ ಶ್ರೀ ಗೋವಿಂದ
ಪಂಕಜಲೋಚನ ಪರಮಾನಂದ

ಮಕರಕುಂಡಲಧರ ಮೋಹನವೇಷ
ರುಕುಮಿಣಿ ವಲ್ಲಭ ಪಾಂಡವ ಪೋಷ

ಕಂಸಮರ್ದನ ಕೌಸ್ತುಭಾಭರಣ
ಹಂಸವಾಹನ ಪೂಜಿತ ಚರಣ

ವರ ವೇಲಾಪುರ ಚೆನ್ನ ಪ್ರಸನ್ನ
ಪುರಂದರವಿಠಲ ಸಕಲ ಗುಣಪೂರ್ಣ

2 comments:

ಅಂತರ್ವಾಣಿ said...

ವಿನೋದ ಅವರೆ,
ಬಹಳ ಚೆನ್ನಾಗಿದೆ ನಿಮ್ಮ ಬ್ಲಾಗು. ದಾಸವಾಣಿಯೊಂದಿಗೆ ದೇವರ ಚಿತ್ರವಿರೋದು ಪ್ಲಸ್ ಪಾಯಿಂಟ್.

Vijay Khasnis said...

Hadinalku lokake daata , Hari pandawara mane doota haadu bekaagittu. Ideya ?