ಶರಣು ಸಿದ್ದಿ ವಿನಾಯಕ
ಶರಣು ವಿದ್ಯಾ ಪ್ರದಾಯಕ
ಶರಣು ಪಾರ್ವತಿ ತನಯ ಮೂರುತಿ
ಶರಣು ಮೂಷಕವಾಹನ
ನಿಟಿಲನೇತ್ರನ ದೇವಿ ಸುತನೆ
ನಾಗಭೂಷಣ ಪ್ರೀಯನೆ
ಕಟಿಕಟಾಂಗದ ಕೋಮಲಾಂಗನೆ
ಕರ್ಣಕುಂಡಲಧಾರನೆ
ಬಟುವ ಮುತ್ತಿನಹಾರ ಪದಕನೆ
ಬಾಹು ಹಸ್ತ ಚತುಷ್ಟನೇ
ಇಟ್ಟ ತೊಡುಗೆಯು ಹೇಮಕಂಕಣ
ಪಾಶದಂಕುಶಧಾರನೆ
ಕೂಕ್ಷಿ ಮಹಾಲಂಬೋದರನೆ
ಇಕ್ಷುಚಾಪನ ಗೆಲಿದನೆ
ಪಕ್ಷಿವಾಹನನಾದ ಪುರಂದರವಿಠಲನ ನಿಜದಾಸನೆ
3 comments:
ನಮಸ್ಕಾರ.
ನೀವು ಇಲ್ಲಿ ಹಾಕಿರುವ ದೇವರನಾಮಗಳನ್ನು ವಿಕಿಪಿಡಿಯಯೊಂದರಲ್ಲಿ ಹಾಕಬಹುದೇ?
-ರಾಮಕ್ರಿಯ
could you please post the lyrics for "vandisuvudAdiyali gaNanAthana"?
Thanks.
Karthik
Post a Comment