ಏನ ಪೇಳಲೆ ಗೋಪಿ ನಿನ್ನ ಮಗನ ಜಾಲ
ಮಾನ ತಪ್ಪಿ ಬಂದ ಮನೆಯೊಳಗೆ
ಕೊಡ ಹಾಲು ಕುಡಿದನೆ ಗಡಿಗೆಯ ಒಡೆದನೆ
ಅಡಗಿದ್ದನೆ ದೊಡ್ಡ ಕೊಡದೊಳಗೆ
ಹುಡುಗ ಸಿಕ್ಕಿದನೆಂದು ಹೊಡೆಯ ಹೋದರೆ
ಬಡವರ ಮಗನೇನೆ ಹೊಡೆಯಲಿಕ್ಕೆ
ಅಳಿಯನ ವೇಷದಿ ಮಗಳ ಕರೆಯ ಬಂದ
ಕಲಹ ಮಾಡಿ ತಾ ಕಳಿಸೆಂದ
ಒಲುಮೆಯಿಂದಲಿ ತಿಂಗಲೆರಡಿಟ್ಟುಕೊಂಡರೆ
ಗಿಳಿಯಂಥ ಹೆಣ್ಣಿನ ಕೆಡಿಸಿದನೆ ಗೋಪಿ
ಇಷ್ಟೊಂದು ಸಿಟ್ಟೇಕೆ ಚಿಣ್ಣ ಕೃಷ್ಣನ ಮೇಲೆ
ಪುಟ್ಟಿಸಬೇಡಿರೆ ಅನ್ಯಾಯವ
ಸೃಷ್ಟಿಗೊಡೆಯ ನಮ್ಮ ಪುರಂದರವಿಠಲನ್ನ
ದೃಷ್ಟಿಸಿ ನೋಡಿರೆ ತೊಟ್ಟಿಲಿನೊಳಗೆ